Thursday, January 29, 2009

ರಕ್ಷಣೆ ಇಲ್ಲದ ಮೇಕೆದಾಟು







ಬೆಂಗಳೂರಿನಿಂದ ಸುಮಾರು ೧೦೦ ಕಿ.ಮೀ. ಕನಕಪುರದಿಂದ ೩೦ ಕಿ.ಮೀ. ದೂರದಲ್ಲಿ ಸಂಗಮ ಸಿಗುತ್ತದೆ. ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಳ ಇದಾಗಿದ್ದು ರಜಾದಿನಗಳಲ್ಲಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಸುಂದರ ಬೆಟ್ಟ ಗುಡ್ಡಗಳ ಪ್ರಕೃತಿಯ ನಡುವೆ ನದಿಗಳ ಒಗ್ಗೂಡುವಿಕೆ ಜನರಲ್ಲಿ ಹಿಂದಿನಿಂದಲೂ ಪವಿತ್ರ ಭಾವನೆಗಳನ್ನು ರೂಪಿಸಿದೆ. ನದಿಗಳ ಸಂಗಮ ಸ್ಥಳಗಳಲ್ಲಿ ಸ್ನಾನ ಮಾಡುವುದು ಪುಣ್ಯವೆಂದು ಜನ ಭಾವಿಸಿದ್ದಾರೆ. ಆದರೆ ಸಂಗಮಕ್ಕೆ ಹೋಗುವ ಪ್ರವಾಸಿಗರು ವಾರಾಂತ್ಯದಲ್ಲಿ ಮನರಂಜನೆ ಹಾಗೂ ಬದಲಾವಣೆಗೂ ಇಂಥ ಸ್ಥಳಗಳಿಗೆ ಭೇಟಿ ನೀಡುತ್ತಾರೆ.
ಆದರೆu ಇಲ್ಲಿ ಬರುವ ಪ್ರವಾಸಿಗರ ವಾಹನಗಳಿಗೆ ಶುಲ್ಕವನ್ನೇನೋ ವಸೂಲು ಮಾಡುತ್ತಾರೆ. ಸಂಗಮದಲ್ಲಿ ಸ್ನಾನ ಮಾಡುವವರಿಗೆ ಯಾವುದೇ ಎಚ್ಚರಿಕೆಯ ಪಲಕವನ್ನಾಗಲಿ ಹಾಕಿಲ್ಲ ಅಥವಾ ಮೇಲ್ವಿಚಾರಣೆಯನ್ನಾಗಲಿ ಮಾಡುವವರಿಲ್ಲ. ಸಂಗಮದ ಸುತ್ತಮುತ್ತಿನ ಜಾಗದಲ್ಲಿ ತಿಂದುಂಡು ಎಸೆದ ತಟ್ಟೆ ಲೋಟ ಮತ್ತು ಬಾಟಲಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಾಯ ಮತ್ತು ಅಸಹ್ಯ ಎರಡನ್ನೂ
ಉಂಟುಮಾಡುತ್ತವೆ.
ಸಂಗಮದಿಂದ ಮೇಕೆದಾಟುವಿಗೆ 4 ಕಿ. ಮೀ. ದೂರದ ದಾರಿ ದುರವಸ್ತೆಯಲ್ಲಿದ್ದು ಪಯಣಿಸುವುದು ತುಂಬಾ ಪ್ರಯಾಸದ ಕೆಲಸ. ಅಲ್ಲೂ ಕೂಡ ಕೆಳಗಿಳಿಯಲು ಸರಿಯಾದ ಮೆಟ್ಟಿಲುಗಳಿಲ್ಲ. ಮೆಕೆದಾಟುವನ್ನು ನೋಡಲು ಕಂಬಿಗಳ ರಕ್ಷ್ಶಣಾವ್ಯವಸ್ಥೆಯನ್ನು ಮಾಡಬಹುದಿತ್ತು. ಆದರೆ ನುಣುಪಾದ ಕಲ್ಲು ಹಾಗೂ ಕೆಲ ಸಾಹಸಿಗಳು ತುತ್ತ ತುದಿಯವರೆಗೂ ಹೋಗಿ ಕುಳಿತುಕೊಳ್ಳುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಕಡೆಯ ಪಕ್ಷ ಜರನ್ನು ನಿಯಂತ್ರಿಸುವ ವ್ಯವಸ್ಥೆಯೂ ಇಲ್ಲ. ಹೀಗಾಗಿ ಜನರೇ ಸ್ವಯಮ್ ನಿಯಂತ್ರಣ ಮಾಡಿಕೊಳ್ಳಬೇಕಾಗಿದೆ.

No comments: