Sunday, January 25, 2009

ಗಣರಾಜ್ಯೋತ್ಸವದ ಆಚರಣೆಗಳು

ಆತ್ಮೀಯರೆ,

ನಾವು ಪ್ರತಿವರ್ಷವೂ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಯಾವುದೋ ಶಾಲೆಯಲ್ಲಿ ಇಲ್ಲವೇ ಸಾರ್ವಜನಿಕವಾಗಿ ಅಧಿಕಾರಿಗಳು ಅನಿವಾರ್ಯವಾಗಿ ಕಾಟಾಚಾರಕ್ಕೆ ಗಣರಾಜ್ಯವನ್ನು ಆಚರಿಸುವುದನ್ನು ಕಾಣುತ್ತೇವೆ.ಗಣರಾಜ್ಯವೆಂದರೆ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವುದು ಎಂದು ಅರ್ಥ. ಸಂವಿದಾನದಲ್ಲಿ ನಿರೂಪಿಸಿರುವ ಮೂಲಭೂತ ಹಕ್ಕುಗಳು ಹಾಗು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದೇ ಇದರ ಮುಖ್ಯವಾದ ಗುರಿ. ರಾಜ್ಯ-ರಾಜ್ಯಗಳ ನಡುವೆ ಪರಸ್ಪರ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡು ನೆಲ, ಜಲ,ಬಾಷೆ ವಿಷಯಗಳಲ್ಲಿ ಪರಸ್ಪರ ಕಿತ್ತಾಡದೇ ನೆಮ್ಮದಿಯಾಗಿ ಬದುಕಬೇಕೆಮ್ಬುದನ್ನು ಸಂವಿಧಾನಕರ್ತರು ಸ್ಪಷ್ಟವಾಗಿ ಒತ್ತಿ ಹೇಳಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದ ಭಾರತಕ್ಕೂ ಸ್ವಾತಂತ್ರೋತ್ತರ ಭಾರತಕ್ಕೂ ಇರುವ ವ್ಯತ್ಯಾಸವಾದರೂ ಏನು?
ಆಗ ರಾಜರುಗಳು ಆಳುತ್ತಿದ್ದರು.ಸಾಮಂತರು ಅವರ ಅಧೀನದಲ್ಲಿರುತ್ತಿದ್ದರು. ಊರೂರಿಗೊಬ್ಬ ಪಾಳೆಯಗಾರರು ಇರುತ್ತಿದ್ದರು . ಜನರು ರಾಜಪ್ರಬುತ್ವದಲ್ಲಿ ರಾಜನು ಏನೇ ತಪ್ಪು ಮಾಡಿದರೂ ಅಸಹಾಯಕರಾಗಿ ಬದುಕು ನಡೆಸುತ್ತಿದ್ದರು. ಆಡಳಿತದಲ್ಲಿ ಯಾವುದೇ ಪಾಲುದಾರಿಕೆ ಇರುತ್ತಿರಲಿಲ್ಲ. ಪಾಳಯಗಾರರಂತು ಕ್ರೂರಿಗಳು ಅಮಾನವೀಯರೂ ಆಗಿರುತ್ತಿದ್ದರು. ಪ್ರಪಂಚದ ದೊಡ್ಡ ರಾಷ್ತ್ರವೆನ್ದು ಕರೆಸಿಕೊಳ್ಳುತ್ತಿರುವ ಭಾರತದಲ್ಲಿ ರಾಜನ ಸ್ಥಾನದಲ್ಲಿ ಮುಖ್ಯಮಂತ್ರಿ ಇದ್ದಾನೆ . ಸಾಮಂತರಂತ ಮಂತ್ರಿಗಳಿದ್ದಾರೆ.ಪಾಳಯಗಾರರಂತ ರಾಜಕಾರಣಿಗಳು ತಮ್ಮದೇ ರೀತಿಯ ಸ್ವಾರ್ತ ರಾಜಕೀಯದಲ್ಲಿ ಮುಳುಗಿ ಸಮಾಜದ ಹಿತವನ್ನು ಮರೆತಿದ್ದಾರೆ ಆಡಳಿತಶಾಹಿ.ಅಧಿಕಾರಶಾಹಿ ಬಂಡವಾಳಶಾಹಿ ವ್ಯವಸ್ಥೆ ಬೆಳೆಯುತ್ತಿದೆ. ಜನರೂ ಅದನ್ನು ಗೌರವಿಸುತ್ತಿದ್ದಾರೆ.ನಮ್ಮ ಚುನಾವಣ ವ್ಯವಸ್ಥೆ ಹದಗೆಟ್ಟಿದೆ. ಲಂಚಗುಳಿತನ ತಾನ್ಡವವಾಡುತ್ತಿದೆ. ನೆಲ ಜಲಗಳ ಸಮಸ್ಯೆಯನ್ನು
ನಾವಿನ್ನೂ ಪರಿಹರಿಸಿಕೊಂಡೆ ಇಲ್ಲ. ಪ್ರಜಾಪ್ರಭುತ್ವ ಮತ್ತು ಗಣತಂತ್ರ ವ್ಯವಸ್ಥೆಯ ಪರಿಕಲ್ಪನೆಯೇ ಇಲ್ಲದ ನಾವು ಮಾಡುತ್ತಿರುವ ಗಣರಾಜ್ಯೋತ್ಸವ ಕೇವಲ ಅರ್ಥವೆ ಗೊತ್ತಿಲ್ಲದ ಆಚರಣೆ ಅಲ್ಲವೇ?

1 comment:

kumar said...

Hello sir Naanu nimma student Nimma Bedagu baraha beautiful keep it up..
thank you
kumar.s