Saturday, February 7, 2009

ಶ್ರೀ ಶಿವಗಿರಿ ಅಥವ ಶಿವಾಳ್ದಪ್ಪನ ಬೆಟ್ಟಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಸಂಗಮಕ್ಕೆ ಹೋಗುವ ದಾರಿಯಲ್ಲಿ ಸುಮಾರು ೮೫ ಕಿ।ಮೀ ದೂರದಲ್ಲಿ ದೊಡ್ದಾಲಹಳ್ಳಿ ಸಿಕ್ಕುತ್ತದೆ।ಅಲ್ಲಿಂದ ಸ್ವಲ್ಪ ದೂರ ಮುಂದಕ್ಕೆ ಸಾಗಿ ಬಲಕ್ಕೆ ಸಾಗಿದರೆ ೫.೫ ಕಿ.ಮೀ.ದೂರದ ಎತ್ತರದ ಬೆಟ್ಟದ ಮೇಲೆ ನಗರದೂರವಾದ ಪ್ರಶಾಂತ ಸ್ಥಳವೊಂದು ಪ್ರತ್ಯಕ್ಷವಾಗುತ್ತದೆ. ಅದೇ ಶಿವಾಳ್ದಪ್ಪನ ಬೆಟ್ಟ ಅಥವ ಶಿವಗಿರಿ ಕ್ಷೇತ್ರ. ಇಲ್ಲಿ ಶಿವನು ತಪಸ್ಸು ಮಾಡಿದನೆಂಬ ಪ್ರತೀತಿ ಇದೆ. ಸುತ್ತಲ ಪ್ರಕೃತಿ ನಯನ ಮನೋಹರವಾಗಿದೆ. ಅಲ್ಲಿಗೆ ಬಂದ ಭಕ್ತರಿಗೆ ನಿತ್ಯ ದಾಸೋಹ ನಡೆಯುತ್ತದೆ. ಶಿವರಾತ್ರಿಯ ಸಮಯದಲ್ಲಿ ದೊಡ್ಡ ಜಾತ್ರೆ ಹಾಗು ಪೂಜೆ ಪುನಸ್ಕಾರಗಳು ಜರುಗುತ್ತವೆ. ಶಿವನ ದೇವಾಲಯ ದೊಡ್ಡ ಬಸವಣ್ಣನ ಮೂರ್ತಿ ,ಲಿಂಗ ಸಮುಚ್ಚಯ,ನಾಗಹುತ್ತ ಆಕರ್ಷಕವಾಗಿವೆ. ಭಕ್ತರಿಗೆ ಮಾತ್ರವಲ್ಲದೆ ನಿಸರ್ಗ ಪ್ರೇಮಿಗಳನ್ನೂ ಆಕರ್ಷಿಸಬಲ್ಲ ಈ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಟ್ಟರೆ ಅದು ನಿರಂತರ ಸವಿ ನೆನಪಾಗಿ ಉಳಿಯುತ್ತದೆ.

No comments: